
South East Central Railway Recruitment 2025: ಬಿಲಾಸ್ಪುರ್ – ಛತ್ತೀಸ್‌ಗಢದಲ್ಲಿನ ದಕ್ಷಿಣ ಪೂರ್ವ ಮಧ್ಯ ರೈಲು ಇಲಾಖೆ 56 ಅಸಿಸ್ಟೆಂಟ್ ಹಾಗೂ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 24-ಜುಲೈ-2025ರೊಳಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ:
- ಸಂಸ್ಥೆಯ ಹೆಸರು: ದಕ್ಷಿಣ ಪೂರ್ವ ಮಧ್ಯ ರೈಲ್ವೆ (South East Central Railway)
- ಒಟ್ಟು ಹುದ್ದೆಗಳು: 56
- ಕೆಲಸದ ಸ್ಥಳ: ಬಿಲಾಸ್ಪುರ್ – ಛತ್ತೀಸ್‌ಗಢ
- ಹುದ್ದೆಗಳ ಹೆಸರು: ಅಸಿಸ್ಟೆಂಟ್, ಟೆಕ್ನಿಷಿಯನ್
- ವೇತನ: ಸಂಸ್ಥೆಯ ನಿಯಮಗಳಂತೆ
ಖಾಲಿ ಹುದ್ದೆಗಳ ವಿವರ:
ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
---|---|
ಸೀನಿಯರ್ ಸೆಕ್ಷನ್ ಎಂಜಿನಿಯರ್ (TM) | 13 |
ಜೂನಿಯರ್ ಎಂಜಿನಿಯರ್ (TM) | 7 |
ಟೆಕ್ನಿಷಿಯನ್ (TM) | 2 |
ಅಸಿಸ್ಟೆಂಟ್ (TM) | 34 |
ಅರ್ಹತಾ ವಿವರಗಳು:
- ಶೈಕ್ಷಣಿಕ ಅರ್ಹತೆ: ದಕ್ಷಿಣ ಪೂರ್ವ ಮಧ್ಯ ರೈಲ್ವೆ ನಿಬಂಧನೆಗಳ ಪ್ರಕಾರ.
- ವಯೋಮಿತಿ: ಗರಿಷ್ಠ 64 ವರ್ಷ.
ವಯೋ ಮಿತಿ ರಿಯಾಯಿತಿ: ನಿಯಮಗಳ ಪ್ರಕಾರ
ಆಯ್ಕೆ ವಿಧಾನ:
- ಲಿಖಿತ ಪರೀಕ್ಷೆ
- ಸಂದರ್ಶನ
ಅರ್ಜಿಸಲ್ಲಿಸುವ ವಿಧಾನ (Offline):
- ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಮತ್ತು ಅರ್ಹತೆ ಪರಿಶೀಲಿಸಿ.
- ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಹೊಂದಿರಲಿ, ಜೊತೆಗೆ ಅಗತ್ಯ ದಾಖಲೆಗಳು (ID proof, ವಿದ್ಯಾರ್ಹತೆ, ಫೋಟೋ, ಅನುಭವದ ದಾಖಲೆ ಇತ್ಯಾದಿ) ಸಿದ್ಧವಾಗಿರಲಿ.
- ಅಧಿಕೃತ ವೆಬ್‌ಸೈಟ್ ಅಥವಾ ಅಧಿಸೂಚನೆಯಲ್ಲಿನ ಲಿಂಕ್‌ನಿಂದ ಅರ್ಜಿ ಡೌನ್‌ಲೋಡ್ ಮಾಡಿ ಮತ್ತು ನಿಗದಿತ ಫಾರ್ಮ್ಯಾಟ್‌ನಲ್ಲಿ ಭರ್ತಿ ಮಾಡಿ.
- ಶುಲ್ಕ ಸಲ್ಲಿಸುವ ಅಗತ್ಯವಿದ್ದರೆ, ನಿಗದಿತ ಪ್ರಕಾರ ಪಾವತಿ ಮಾಡಬೇಕು.
- ಎಲ್ಲ ಮಾಹಿತಿಗಳನ್ನು ಸರಿಯಾಗಿ ಪರಿಶೀಲಿಸಿ.
- ಅರ್ಜಿಯನ್ನು ಸ್ವ–ಸಾಕ್ಷ್ಯೀಕರಿಸಿದ ದಾಖಲೆಗಳೊಂದಿಗೆ ಕೆಳಗಿನ ವಿಳಾಸಕ್ಕೆ ಕಳುಹಿಸಿ:
ವಿಳಾಸ:
Principal Chief Personnel Officer, SECR, Bilaspur, Chhattisgarh
(Register Post, Speed Post ಅಥವಾ ಇತರೆ ಸೇವೆಗಳ ಮೂಲಕ ಕಳುಹಿಸಬೇಕು)
ಮುಖ್ಯ ದಿನಾಂಕಗಳು:
- ಅರ್ಜಿಗೆ ಪ್ರಾರಂಭ ದಿನಾಂಕ: 25-ಜೂನ್-2025
- ಕೊನೆಯ ದಿನಾಂಕ: 24-ಜುಲೈ-2025