
ಎನ್ಎಲ್ಸಿ ನೇಮಕಾತಿ 2025: 45 ಮೆಡಿಕಲ್ ಲ್ಯಾಬ್ ಟೆಕ್ನಿಷಿಯನ್ ಮತ್ತು ಕನ್ವೇಯರ್ ಬೆಲ್ಟ್ ವಲ್ಕನೈಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ನೆಯ್ವೇಲಿ ಲಿಗ್ನೈಟ್ ಕಾರ್ಪೊರೇಷನ್ ಲಿಮಿಟೆಡ್ (NLC) ನ ಅಧಿಕೃತ ಅಧಿಸೂಚನೆಯನ್ವಯ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ತಮಿಳುನಾಡಿನ ನೆಯ್ವೇಲಿ ನಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಹಾಗೂ ಆಫ್ಲೈನ್ ಮೂಲಕ 14 ಆಗಸ್ಟ್ 2025ರೊಳಗೆ ಅರ್ಜಿ ಸಲ್ಲಿಸಬಹುದು.
ಎನ್ಎಲ್ಸಿ ಹುದ್ದೆಗಳ ವಿವರ
ಸಂಸ್ಥೆಯ ಹೆಸರು: ನೆಯ್ವೇಲಿ ಲಿಗ್ನೈಟ್ ಕಾರ್ಪೊರೇಷನ್ ಲಿಮಿಟೆಡ್ (NLC)
ಒಟ್ಟು ಹುದ್ದೆಗಳ ಸಂಖ್ಯೆ: 45
ಕೆಲಸದ ಸ್ಥಳ: ನೆಯ್ವೆಲಿ – ತಮಿಳುನಾಡು
ಹುದ್ದೆಯ ಹೆಸರು: ಮೆಡಿಕಲ್ ಲ್ಯಾಬ್ ಟೆಕ್ನಿಷಿಯನ್, ಕನ್ವೇಯರ್ ಬೆಲ್ಟ್ ವಲ್ಕನೈಸರ್
ವೇತನ ಶ್ರೇಣಿ: ರೂ. 8766 ರಿಂದ ರೂ. 10019/- ಪ್ರತಿ ತಿಂಗಳು
ಹುದ್ದಾವಾರು ಖಾಲಿ ಜಾಗಗಳ ವಿವರ:
ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
---|---|
ಮೆಡಿಕಲ್ ಲ್ಯಾಬ್ ಟೆಕ್ನಿಷಿಯನ್ (ಪಥಾಲಜಿ) | 15 |
ಮೆಡಿಕಲ್ ಲ್ಯಾಬ್ ಟೆಕ್ನಿಷಿಯನ್ (ರೇಡಿಯೋಲಜಿ) | 10 |
ಕನ್ವೇಯರ್ ಬೆಲ್ಟ್ ವಲ್ಕನೈಸರ್ | 20 |
ಅರ್ಹತಾ ವಿವರಗಳು:
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12ನೇ ತರಗತಿ (PUC) ಪೂರೈಸಿರಬೇಕು.
ವಯೋಮಿತಿ: ಅಭ್ಯರ್ಥಿಯು 01 ಏಪ್ರಿಲ್ 2025ರ ಹೊತ್ತಿಗೆ ಕನಿಷ್ಠ 18 ವರ್ಷ ವಯಸ್ಸಿನವಿರಬೇಕು.
ವಯೋಮಿತಿ ಸಡಿಲಿಕೆ: ಎನ್ಎಲ್ಸಿ ನಿಯಮಾವಳಿಯ ಪ್ರಕಾರ ಲಭ್ಯವಿರುತ್ತದೆ.
ಆಯ್ಕೆ ವಿಧಾನ:
- ಲಿಖಿತ ಪರೀಕ್ಷೆ
- ಸಂದರ್ಶನ
ಅರ್ಜಿಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ nlcindia.in ಮೂಲಕ 28-07-2025 ರಿಂದ 14-08-2025 ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಅರ್ಜಿಯ ಪ್ರಿಂಟ್ಆೌಟ್ನೊಂದಿಗೆ ಅಗತ್ಯವಾದ ದಾಖಲೆಗಳ(self-attested) ಪ್ರತಿಗಳನ್ನು ಕೆಳಗಿನ ವಿಳಾಸಕ್ಕೆ 20-08-2025 ರೊಳಗೆ ಕಳುಹಿಸಬೇಕು:
ವಿಳಾಸ:
General Manager,
Learning and Development Center,
NLC India, Circle-20,
Neyveli – 607803
ಮುಖ್ಯ ದಿನಾಂಕಗಳು:
- ಆನ್ಲೈನ್ ಅರ್ಜಿ ಆರಂಭ ದಿನಾಂಕ: 28-07-2025
- ಆನ್ಲೈನ್ ಅರ್ಜಿ ಕೊನೆಯ ದಿನಾಂಕ: 14-08-2025
- ಅರ್ಜಿಯ ಪ್ರತಿಯನ್ನು ಕಳುಹಿಸುವ ಕೊನೆಯ ದಿನಾಂಕ: 20-08-2025
ಮಹತ್ವದ ಲಿಂಕುಗಳು:
- ಅಧಿಸೂಚನೆ PDF – ಇಲ್ಲಿ ಕ್ಲಿಕ್ ಮಾಡಿ
- ಆನ್ಲೈನ್ ಅರ್ಜಿ ಸಲ್ಲಿಸಲು – ಇಲ್ಲಿ ಕ್ಲಿಕ್ ಮಾಡಿ
- ಅಧಿಕೃತ ವೆಬ್ಸೈಟ್: nlcindia.in
ಹೆಚ್ಚಿನ ವಿವರಗಳಿಗೆ ಎನ್ಎಲ್ಸಿ ವೆಬ್ಸೈಟ್ ನೋಡಿ ಅಥವಾ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿ.