
RBI ನೇಮಕಾತಿ 2025: ಒಟ್ಟು 120 ಅಧಿಕಾರಿಗಳ ಹುದ್ದೆಗಳ ಭರ್ತಿಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. RBI ಅಧಿಕೃತ ಪ್ರಕಟಣೆ (ಸೆಪ್ಟೆಂಬರ್ 2025) ಮೂಲಕ ಈ ಹುದ್ದೆಗಳ ಭರ್ತಿಯನ್ನು ನಡೆಸಲಿದೆ. ದೇಶವ್ಯಾಪಿ ಸರ್ಕಾರಿ ಹುದ್ದೆಗಾಗಿ ಎದುರು ನೋಡುತ್ತಿರುವ ಉದ್ಯೋಗಾರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 30-ಸೆಪ್ಟೆಂಬರ್-2025ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
RBI ಖಾಲಿ ಹುದ್ದೆಗಳ ಪ್ರಕಟಣೆ
- ಬ್ಯಾಂಕ್ ಹೆಸರು: ಭಾರತೀಯ ರಿಸರ್ವ್ ಬ್ಯಾಂಕ್ (RBI)
- ಒಟ್ಟು ಹುದ್ದೆಗಳು: 120
- ಕೆಲಸದ ಸ್ಥಳ: ಭಾರತದೆಲ್ಲೆಡೆ
- ಹುದ್ದೆಯ ಹೆಸರು: ಅಧಿಕಾರಿಗಳು
- ವೇತನ: ₹78,450 – ₹1,50,374/- ಪ್ರತಿ ತಿಂಗಳು
RBI ಹುದ್ದೆಗಳ ವಿವರಗಳು
ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
---|---|
ಅಧಿಕಾರಿಗಳು ಗ್ರೇಡ್ ‘B’ (DR) – General | 83 |
ಅಧಿಕಾರಿಗಳು ಗ್ರೇಡ್ ‘B’ (DR) – (DEPR) | 17 |
ಅಧಿಕಾರಿಗಳು ಗ್ರೇಡ್ ‘B’ (DR) – (DSIM) | 20 |
RBI ಅರ್ಹತಾ ವಿವರಗಳು
ಶೈಕ್ಷಣಿಕ ಅರ್ಹತೆ:
ಹುದ್ದೆಯ ಹೆಸರು | ಅರ್ಹತೆ |
---|---|
ಅಧಿಕಾರಿಗಳು (General) | ಪದವಿ (Graduation) |
ಅಧಿಕಾರಿಗಳು (DEPR) | M.A, M.Sc |
ಅಧಿಕಾರಿಗಳು (DSIM) | ಪದವಿ, ಸ್ನಾತಕೋತ್ತರ ಪದವಿ |
ವಯೋಮಿತಿ:
01-ಸೆಪ್ಟೆಂಬರ್-2025 ರಂದು ಅಭ್ಯರ್ಥಿಯ ಕನಿಷ್ಠ ವಯಸ್ಸು 21 ವರ್ಷ ಮತ್ತು ಗರಿಷ್ಠ 30 ವರ್ಷ ಇರಬೇಕು.
ವಯೋಮಿತಿ ಸಡಿಲಿಕೆ:
- OBC ಅಭ್ಯರ್ಥಿಗಳಿಗೆ: 03 ವರ್ಷ
- SC/ST ಅಭ್ಯರ್ಥಿಗಳಿಗೆ: 05 ವರ್ಷ
- PwBD (Gen/EWS): 10 ವರ್ಷ
- PwBD (OBC): 13 ವರ್ಷ
- PwBD (SC/ST): 15 ವರ್ಷ
ಅರ್ಜಿಶುಲ್ಕ (Application Fee):
- RBI ಸಿಬ್ಬಂದಿ: ಶುಲ್ಕವಿಲ್ಲ
- SC/ST/PwBD ಅಭ್ಯರ್ಥಿಗಳು: ₹100/-
- ಸಾಮಾನ್ಯ/OBC/EWS ಅಭ್ಯರ್ಥಿಗಳು: ₹850/-
- ಪಾವತಿ ವಿಧಾನ: ಆನ್ಲೈನ್
ಆಯ್ಕೆ ಪ್ರಕ್ರಿಯೆ:
- ಆನ್ಲೈನ್ / ಲಿಖಿತ ಪರೀಕ್ಷೆ
- ಸಂದರ್ಶನ
RBI ನೇಮಕಾತಿ 2025 – ಅರ್ಜಿ ಸಲ್ಲಿಸುವ ವಿಧಾನ
- RBI ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅಭ್ಯರ್ಥಿ ಅರ್ಹತೆಯನ್ನು ಪೂರೈಸುತ್ತಾನೆಯೇ ಎಂಬುದು ಖಚಿತಪಡಿಸಿಕೊಳ್ಳಿ.
- ಆನ್ಲೈನ್ ಅರ್ಜಿ ಪ್ರಕ್ರಿಯೆ ಆರಂಭಿಸುವ ಮೊದಲು ಮಾನ್ಯ ಇಮೇಲ್ ID ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು. ಜೊತೆಗೆ ID ಪ್ರೂಫ್, ವಯಸ್ಸು, ವಿದ್ಯಾರ್ಹತೆ, ರೆಸ್ಯೂಮ್, ಅನುಭವದ ದಾಖಲೆಗಳು (ಇದ್ದರೆ) ಸಿದ್ಧವಾಗಿರಲಿ.
- RBI Officers Apply Online ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ, ಪ್ರಮಾಣಪತ್ರಗಳು ಮತ್ತು ಫೋಟೋ ಅಪ್ಲೋಡ್ ಮಾಡಿ.
- ವರ್ಗಾನುಸಾರ ಅರ್ಜಿ ಶುಲ್ಕವನ್ನು ಪಾವತಿಸಿ.
- ಅರ್ಜಿ ಸಲ್ಲಿಸಿದ ನಂತರ, ಭವಿಷ್ಯದ ಉಲ್ಲೇಖಕ್ಕಾಗಿ Application Number ಅಥವಾ Request Number ಅನ್ನು ಉಳಿಸಿಕೊಳ್ಳಿ.
ಮುಖ್ಯ ದಿನಾಂಕಗಳು:
- ಆನ್ಲೈನ್ ಅರ್ಜಿ ಪ್ರಾರಂಭ ದಿನಾಂಕ: 10-ಸೆಪ್ಟೆಂಬರ್-2025
- ಆನ್ಲೈನ್ ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ ಕೊನೆಯ ದಿನಾಂಕ: 30-ಸೆಪ್ಟೆಂಬರ್-2025
- ಗ್ರೇಡ್ ‘B’ (DR) – General ಪ್ರಥಮ ಹಂತ ಆನ್ಲೈನ್ ಪರೀಕ್ಷೆ: 18-ಅಕ್ಟೋಬರ್-2025
- ಗ್ರೇಡ್ ‘B’ (DR) – DEPR (ಪೇಪರ್ I & II)/DSIM (ಪೇಪರ್ I) ಪ್ರಥಮ ಹಂತ ಆನ್ಲೈನ್ ಪರೀಕ್ಷೆ: 19-ಅಕ್ಟೋಬರ್-2025
- ಗ್ರೇಡ್ ‘B’ (DR) – General ದ್ವಿತೀಯ ಹಂತ ಆನ್ಲೈನ್ ಪರೀಕ್ಷೆ: 06-ಡಿಸೆಂಬರ್-2025
- ಗ್ರೇಡ್ ‘B’ (DR) – DEPR (ಪೇಪರ್ I & II)/DSIM (ಪೇಪರ್ II ಮತ್ತು III) ದ್ವಿತೀಯ ಹಂತ ಆನ್ಲೈನ್/ಲಿಖಿತ ಪರೀಕ್ಷೆ: 07-ಡಿಸೆಂಬರ್-2025
ಪ್ರಮುಖ ಲಿಂಕುಗಳು:
- ಅಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ
- ಆನ್ಲೈನ್ ಅರ್ಜಿ: ಇಲ್ಲಿ ಕ್ಲಿಕ್ ಮಾಡಿ
- ಅಧಿಕೃತ ವೆಬ್ಸೈಟ್: rbi.org.in