DRDO Recruitment 2026: 188 ಆಡಳಿತಾಧಿಕಾರಿ (Administrative Officer) ಮತ್ತು ಪ್ರೈವೇಟ್ ಸೆಕ್ರಟರಿ (Private Secretary) ಹುದ್ದೆಗಳ ಭರ್ತಿಗಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಭಾರತ ಸರ್ಕಾರದ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 29 ಮಾರ್ಚ್ 2026 ರೊಳಗಾಗಿ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
DRDO ಖಾಲಿ ಹುದ್ದೆಗಳ ಮಾಹಿತಿ
ಸಂಸ್ಥೆಯ ಹೆಸರು: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)
ಒಟ್ಟು ಹುದ್ದೆಗಳು: 188
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಹುದ್ದೆಗಳ ಹೆಸರು: ಆಡಳಿತಾಧಿಕಾರಿ, ಪ್ರೈವೇಟ್ ಸೆಕ್ರಟರಿ ಹಾಗೂ ಇತರೆ ಹುದ್ದೆಗಳು
ವೇತನ: ₹35,400 – ₹2,09,200 ಪ್ರತಿಮಾಸ
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
| ಹುದ್ದೆ ಹೆಸರು | ಹುದ್ದೆಗಳ ಸಂಖ್ಯೆ | ವಿದ್ಯಾರ್ಹತೆ |
|---|---|---|
| Joint Director (Administration) | 4 | ಪದವಿ (Degree) |
| Joint Director (Accounts) | 1 | ಪದವಿ |
| Addl CCE | 1 | BE / B.Tech |
| Sr. Accounts Officer Grade – II | 1 | ಪದವಿ |
| Administrative Officer | 46 | ಪದವಿ |
| Stores Officer | 34 | ಪದವಿ |
| Accounts Officer | 16 | ಪದವಿ |
| Private Secretary | 85 | ನಿಯಮಾನುಸಾರ |
ವೇತನ ವಿವರ
| ಹುದ್ದೆ | ವೇತನ (ಪ್ರತಿ ತಿಂಗಳು) |
|---|---|
| Joint Director (Administration) | ₹78,800 – ₹2,09,200 |
| Joint Director (Accounts) | ₹78,800 – ₹2,09,200 |
| Addl CCE | ₹78,800 – ₹2,09,200 |
| Sr. Accounts Officer Grade – II | ₹47,600 – ₹1,51,100 |
| Administrative Officer | ₹35,400 – ₹1,12,400 |
| Stores Officer | ₹35,400 – ₹1,12,400 |
| Accounts Officer | ₹35,400 – ₹1,12,400 |
| Private Secretary | ₹35,400 – ₹1,12,400 |
ವಯೋಮಿತಿ
DRDO ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ಗರಿಷ್ಠ ವಯಸ್ಸು 56 ವರ್ಷಗಳಾಗಿರಬೇಕು.
ವಯೋಮಿತಿ ಸಡಿಲಿಕೆ:
DRDO ನಿಯಮಾನುಸಾರ ಅನ್ವಯಿಸುತ್ತದೆ.
ಅರ್ಜಿ ಸಲ್ಲಿಸುವ ವಿಧಾನ (How to Apply)
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆಫ್ಲೈನ್ ಮೂಲಕ ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಭರ್ತಿ ಮಾಡಿದ ಅರ್ಜಿ ನಮೂನೆ ಹಾಗೂ ಅಗತ್ಯ ದಾಖಲೆಗಳ ಸ್ವಯಂಪ್ರಮಾಣಿತ ಪ್ರತಿಗಳನ್ನು ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.
ವಿಳಾಸ:
Deputy Director,
Directorate of Personnel (Pers-AA1),
Room No. 266, 2nd Floor,
DRDO Bhawan,
New Delhi – 110105
ಅರ್ಜಿಯನ್ನು ಕಳುಹಿಸುವ ಕೊನೆಯ ದಿನಾಂಕ: 29 ಮಾರ್ಚ್ 2026
ಅರ್ಜಿ ಸಲ್ಲಿಸುವ ಹಂತಗಳು
- ಮೊದಲು DRDO ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಮತ್ತು ಅರ್ಹತೆಗಳನ್ನು ಪರಿಶೀಲಿಸಿ.
- ಸಂಪರ್ಕಕ್ಕಾಗಿ ಸರಿಯಾದ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಹೊಂದಿರಬೇಕು.
- ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ – ಗುರುತಿನ ಚೀಟಿ, ವಯಸ್ಸಿನ ದಾಖಲೆ, ವಿದ್ಯಾರ್ಹತೆ ಪ್ರಮಾಣಪತ್ರ, ಇತ್ತೀಚಿನ ಫೋಟೋ, ರೆಸ್ಯೂಮ್, ಅನುಭವ ಪ್ರಮಾಣಪತ್ರ ಇತ್ಯಾದಿ.
- ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ.
- ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿ.
- ಅಗತ್ಯವಿದ್ದಲ್ಲಿ ಅರ್ಜಿ ಶುಲ್ಕವನ್ನು ಪಾವತಿಸಿ.
- ಎಲ್ಲಾ ಮಾಹಿತಿಯನ್ನು ಪರಿಶೀಲಿಸಿ.
- ನಂತರ ಅರ್ಜಿ ನಮೂನೆಯನ್ನು ರಿಜಿಸ್ಟರ್ಡ್ ಪೋಸ್ಟ್ / ಸ್ಪೀಡ್ ಪೋಸ್ಟ್ ಮೂಲಕ ಮೇಲ್ಕಂಡ ವಿಳಾಸಕ್ಕೆ ಕಳುಹಿಸಬೇಕು.
ಪ್ರಮುಖ ದಿನಾಂಕಗಳು
- ಅರ್ಜಿ ಪ್ರಾರಂಭ ದಿನಾಂಕ: 12-02-2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29-03-2026
ಪ್ರಮುಖ ಲಿಂಕ್ಗಳು
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ಫಾರ್ಮ್ (PDF): Click Here
ಅಧಿಕೃತ ವೆಬ್ಸೈಟ್: drdo.gov.in

