🚚 ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನೇಮಕಾತಿ 2025 – 10 ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ: 06 ಆಗಸ್ಟ್ 2025


BEL Recruitment 2025: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಬೆಂಗಳೂರು – ಕರ್ನಾಟಕದಲ್ಲಿ ಖಾಲಿ ಇರುವ 10 ಡ್ರೈವರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಆಫ್‌ಲೈನ್ ಮೂಲಕ 06 ಆಗಸ್ಟ್ 2025 ರೊಳಗೆ ಅರ್ಜಿ ಸಲ್ಲಿಸಬಹುದು.


ಹುದ್ದೆಗಳ ವಿವರ:

  • ಸಂಸ್ಥೆ ಹೆಸರು: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)
  • ಒಟ್ಟು ಹುದ್ದೆಗಳ ಸಂಖ್ಯೆ: 10
  • ಹುದ್ದೆ: ಡ್ರೈವರ್
  • ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
  • ವೇತನ ಶ್ರೇಣಿ: ₹20,500/- ರಿಂದ ₹79,000/- ಪ್ರತಿ ತಿಂಗಳು

ಅರ್ಹತಾ ವಿವರಗಳು:

  • ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಯು ಮಾನ್ಯತೆ ಪಡೆದ ಬೋರ್ಡ್‌ನಿಂದ 10ನೇ ತರಗತಿ ಪೂರೈಸಿರಬೇಕು.
  • ಗರಿಷ್ಠ ವಯೋಮಿತಿ (01-07-2025 ರಂದು): 43 ವರ್ಷ

ವಯೋಮಿತಿ ರಿಯಾಯಿತಿ:

  • OBC (NCL): 3 ವರ್ಷ
  • SC ಅಭ್ಯರ್ಥಿಗಳು: 5 ವರ್ಷ

ಆಯ್ಕೆ ಪ್ರಕ್ರಿಯೆ:

  1. ಶಾರ್ಟ್‌ಲಿಸ್ಟ್
  2. ಡ್ರೈವಿಂಗ್ ಪರೀಕ್ಷೆ
  3. ಲಿಖಿತ ಪರೀಕ್ಷೆ

ಅರ್ಜಿ ಸಲ್ಲಿಸುವ ವಿಧಾನ (ಆಫ್‌ಲೈನ್):

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೆಳಗಿನ ಕ್ರಮದಲ್ಲಿ ಅರ್ಜಿ ಸಲ್ಲಿಸಬಹುದು:

ಅರ್ಜಿಸಲು ಹೆಜ್ಜೆಗಳು:

  1. BEL ಅಧಿಕೃತ ಅಧಿಸೂಚನೆಯನ್ನು ಪೂರ್ಣವಾಗಿ ಓದಿ, ಅರ್ಹತೆ ಹೊಂದಿದಿರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.
  2. ಸರಿಯಾದ ಇಮೇಲ್ ಐಡಿ, ಮೊಬೈಲ್ ನಂಬರು ಮತ್ತು ಅಗತ್ಯ ದಾಖಲೆಗಳು (ID ಪ್ರೂಫ್, ಶೈಕ್ಷಣಿಕ ಪ್ರಮಾಣಪತ್ರಗಳು, ಚಿತ್ರ, ರೆಸ್ಯೂಮ್, ಅನುಭವದ ದಾಖಲೆಗಳು ಇತ್ಯಾದಿ) ಸಿದ್ಧಪಡಿಸಿ.
  3. BEL ಅಧಿಕೃತ ವೆಬ್‌ಸೈಟ್ ಅಥವಾ ಅಧಿಸೂಚನೆಯಲ್ಲಿ ನೀಡಿರುವ ಲಿಂಕ್‌ನಿಂದ ಅರ್ಜಿ ಪಡಿಸಿ ಮತ್ತು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ.
  4. (ಅರ್ಹವಿದ್ದರೆ ಮಾತ್ರ) ಅರ್ಜಿ ಶುಲ್ಕ ಪಾವತಿಸಿ.
  5. ಎಲ್ಲಾ ವಿವರಗಳನ್ನು ಪರಿಶೀಲಿಸಿ.
  6. ಭರ್ತಿಯಾದ ಅರ್ಜಿ ನಮೂನೆ ಹಾಗೂ ಅಗತ್ಯ ದಾಖಲೆಗಳ ಸ್ವಪ್ರಮಾಣಿತ ನಕಲನ್ನು ಈ ವಿಳಾಸಕ್ಕೆ ಕಳುಹಿಸಿ:
    DGM (HR/CSG),
    Bharat Electronics Limited,
    Jalahalli Post,
    Bengaluru – 560013

    (ನೊಂದಾಯಿತ ಅಂಚೆ/ಸ್ಪೀಡ್ ಪೋಸ್ಟ್ ಅಥವಾ ಯಾವುದೇ ಮಾನ್ಯ ಸೇವೆಯ ಮೂಲಕ)

ಮುಖ್ಯ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 15-07-2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06-08-2025

ಮುಖ್ಯ ಲಿಂಕುಗಳು:


You cannot copy content of this page

Scroll to Top