
ಹಾಯ್ ಗೆಳೆಯರೇ…..
ಕೃಷಿಕರಿಗೆ ಕೃಷಿ ಹಾನಿಯ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರಿಗೆ ಬೆಳೆ ಹಾನಿಯ ಮೊತ್ತವನ್ನು ಬೆಳೆ ವಿಮೆಯ ರೂಪದಲ್ಲಿ ನೀಡುತ್ತದೆ. 2023-24ನೇ ಸಾಲಿನ ಬೆಳೆ ವಿಮೆ ಪಾವತಿ ಮಾಡಿದವರಿಗೆ ಬೆಳೆ ವಿಮೆ ಪರಿಹಾರ ಹಣ ಬರುತ್ತಿದೆ ಅಥವಾ ಈಗಾಗಲೇ ಬಂದಿದೆ. ಅಂತಹ ರೈತರು ನಿಮ್ಮ ಬೆಳೆ ವಿಮೆಯ ಹಣವು ಎಷ್ಟು ಮತ್ತು ಯಾವ ಬ್ಯಾಂಕ್ ಖಾತೆಗೆ ಜಮ ಆಗಿದೆ ಅಂತ ಹೀಗೆ ತಿಳಿದುಕೊಳ್ಳಿ.
ನಿಮ್ಮ ಬೆಳೆ ವಿಮೆಯ ಹಣವನ್ನು ಈ ರೀತಿಯಾಗಿ ಪರಿಶೀಲಿಸಿ.
ಮೊದಲನೆಯದಾಗಿ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿರಿ
https://www.samrakshane.karnataka.gov.in

ನಿಮಗೆ ಈ ಮೇಲಿನ ಪುಟವು ತೆರೆದುಕೊಳ್ಳುತ್ತದೆ.
ಇದರಲ್ಲಿ ವರ್ಷದ ಆಯ್ಕೆ – 2023-24 ನ್ನು ಸೆಲೆಕ್ಟ್ ಮಾಡಿರಿ. ಮುಂದೆ ಋತು ಆಯ್ಕೆ – Kharif ನ್ನು ಸೆಲೆಕ್ಟ್ ಮಾಡಿ ಮುಂದೆ/Go ಬಟನ್ ಒತ್ತಿರಿ.
ಆಗ ಸಂರಕ್ಷಣೆ ವೆಬ್ ಪೇಜ್ ಓಪನ್ ಆಗುತ್ತದೆ.

ಇಲ್ಲಿ Farmers ಆಯ್ಕೆಯಲ್ಲಿ 3 ನೇ ಒಪ್ಶನ್ Check Status ಅನ್ನು ಒತ್ತಿರಿ. (ಮೇಲಿನ ಫೋಟೋದಲ್ಲಿ ತೋರಿಸಿದಂತೆ)

ಆಗ ನಿಮಗೆ ಈ ಮೇಲಿನ ಪುಟವು ತೆರೆದುಕೊಳ್ಳುತ್ತದೆ.
ಇಲ್ಲಿ ನಿಮ್ಮ ಅಪ್ಲಿಕೇಶನ್ ನಂಬರ್ ಅಥವಾ ಮೊಬೈಲ್ ನಂಬರ್ ಅಥವಾ ಆಧಾರ್ ನಂಬರ್ ಅಣ್ಣ ನಮೂದಿಸಿ.
ಅಲ್ಲದೆ ಕೆಳಗಡೆ ಮುಂದೆ ಕೊಟ್ಟಿರುವ ಕೋಡ್ ಅನ್ನು ನಮೂದಿಸಿ. ಸರ್ಚ್ ಕೊಟ್ಟಲ್ಲಿ ನಿಮ್ಮ ಬೆಳೆ ವಿಮೆ ಪರಿಹಾರದ ಮಾಹಿತಿ ಲಭ್ಯವಾಗಲಿದೆ.