KSFES Recruitment 2026: ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 472 ಅಗ್ನಿಶಾಮಕ (Fire Fighter) ಮತ್ತು ಅಗ್ನಿಶಾಮಕ ಠಾಣಾಧಿಕಾರಿ (Fire Station Officer – FSO) ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೂಲಕ ಅಧಿಸೂಚನೆ ಪ್ರಕಟಿಸಲಾಗಿದೆ.
ಕರ್ನಾಟಕ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅರ್ಹ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ದಿನಾಂಕ 22 ಡಿಸೆಂಬರ್ 2026 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಕರ್ನಾಟಕ ಅಗ್ನಿಶಾಮಕ ಇಲಾಖೆ ನೇಮಕಾತಿ 2026 – ಸಂಕ್ಷಿಪ್ತ ಮಾಹಿತಿ
| ವಿವರಗಳು | ಮಾಹಿತಿ |
|---|---|
| ಸಂಸ್ಥೆಯ ಹೆಸರು | ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ (KSFES) |
| ಒಟ್ಟು ಹುದ್ದೆಗಳು | 472 |
| ಉದ್ಯೋಗ ಸ್ಥಳ | ಕರ್ನಾಟಕ |
| ಹುದ್ದೆಗಳ ಹೆಸರು | ಅಗ್ನಿಶಾಮಕ, ಅಗ್ನಿಶಾಮಕ ಠಾಣಾಧಿಕಾರಿ |
| ವೇತನ | ₹37,500 – ₹76,100 ಪ್ರತಿ ತಿಂಗಳು |
| ಅರ್ಜಿ ಸಲ್ಲಿಸುವ ವಿಧಾನ | ಆನ್‌ಲೈನ್ |
ಹುದ್ದೆಗಳ ವಿವರ
| ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
|---|---|
| ಅಗ್ನಿಶಾಮಕ (Fire Fighter) | 460 |
| ಅಗ್ನಿಶಾಮಕ ಠಾಣಾಧಿಕಾರಿ (FSO) | 16 |
| ಒಟ್ಟು | 472 |
ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಕೆಳಗಿನ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು.
- 10ನೇ ತರಗತಿ (SSLC)
- ಪಿಯುಸಿ (PUC)
- ವಿಜ್ಞಾನ ವಿಭಾಗದಲ್ಲಿ ಪದವಿ (ರಸಾಯನಶಾಸ್ತ್ರ ವಿಷಯದೊಂದಿಗೆ)
ಸೂಚನೆ: ಪ್ರತಿ ಹುದ್ದೆಗೆ ಅಗತ್ಯವಿರುವ ನಿಖರ ಶೈಕ್ಷಣಿಕ ಅರ್ಹತೆಯನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಬೇಕು.
ವಯೋಮಿತಿ
- ಕನಿಷ್ಠ ವಯಸ್ಸು: 18 ವರ್ಷ
- ಗರಿಷ್ಠ ವಯಸ್ಸು: 31 ವರ್ಷ
ಹೊಸ ನಿಯಮಗಳ ಪ್ರಕಾರ ವಯೋಮಿತಿ ನಿಗದಿಪಡಿಸಲಾಗಿದೆ ಎಂದು ಕರಡು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ವಯೋಮಿತಿ ಸಡಿಲಿಕೆ
| ವರ್ಗಗಳು | ವಯೋಮಿತಿ ಸಡಿಲಿಕೆ |
|---|---|
| OBC, 2A, 2B, 3A ಮತ್ತು 3B | 3 ವರ್ಷ |
| SC / ST | 5 ವರ್ಷ |
| PWD ಅಭ್ಯರ್ಥಿಗಳು | 10 ವರ್ಷ |
ಅರ್ಜಿ ಶುಲ್ಕ
| ವರ್ಗಗಳು | ಅರ್ಜಿ ಶುಲ್ಕ |
|---|---|
| ಸಾಮಾನ್ಯ, 2A, 2B, 3A ಮತ್ತು 3B | ₹500/- |
| SC / ST | ₹300/- |
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳನ್ನು ಕೆಳಗಿನ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.
- ಲಿಖಿತ ಪರೀಕ್ಷೆ (Written Examination)
- ದೈಹಿಕ ಗುಣಮಟ್ಟ ಪರೀಕ್ಷೆ (PST)
- ಸಂದರ್ಶನ (Interview)
ದೈಹಿಕ ಅರ್ಹತೆ (Physical Standard Test)
| ದೈಹಿಕ ಮಾನದಂಡ | ಕನಿಷ್ಠ ಅರ್ಹತೆ |
|---|---|
| ಎತ್ತರ (Height) | 168 ಸೆಂ.ಮೀ. |
| ಎದೆ (Chest) | 81 ಸೆಂ.ಮೀ. |
| ಎದೆಯ ವಿಸ್ತರಣೆ | 86 ಸೆಂ.ಮೀ. |
| ತೂಕ (Weight) | 50 ಕೆ.ಜಿ. |
ಅರ್ಜಿ ಸಲ್ಲಿಸುವ ವಿಧಾನ
ಕರ್ನಾಟಕ ಅಗ್ನಿಶಾಮಕ ಇಲಾಖೆ ನೇಮಕಾತಿ 2026ಕ್ಕೆ ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:
- ಮೊದಲಿಗೆ ಅಭ್ಯರ್ಥಿಗಳು KSFES ನೇಮಕಾತಿ 2026ರ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಬೇಕು.
- ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಅಗತ್ಯವಿರುವ ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿಯನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಬೇಕು.
- ಅರ್ಜಿ ಸಲ್ಲಿಸಲು ಮಾನ್ಯವಾದ ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಸಿದ್ಧವಾಗಿಟ್ಟುಕೊಳ್ಳಬೇಕು.
- ಅಗತ್ಯ ದಾಖಲೆಗಳಾದ ಆಧಾರ್ ಕಾರ್ಡ್, ವಯಸ್ಸಿನ ದಾಖಲೆ, ಶೈಕ್ಷಣಿಕ ಪ್ರಮಾಣಪತ್ರಗಳು, ಇತ್ತೀಚಿನ ಭಾವಚಿತ್ರ ಹಾಗೂ ಇತರ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು.
- ಕೆಳಗೆ ನೀಡಿರುವ ಆನ್‌ಲೈನ್ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಅರ್ಜಿ ನಮೂನೆಯಲ್ಲಿ ಕೇಳಿರುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಬೇಕು.
- ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು.
- ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಪಾವತಿಸಬೇಕು.
- ಕೊನೆಯಲ್ಲಿ Submit ಬಟನ್ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.
- ಅರ್ಜಿ ಸಲ್ಲಿಸಿದ ನಂತರ ಅರ್ಜಿ ಸಂಖ್ಯೆ (Application Number) ಅಥವಾ ಸ್ವೀಕೃತಿ ಸಂಖ್ಯೆಯನ್ನು ಮುಂದಿನ ಉಲ್ಲೇಖಕ್ಕಾಗಿ ಕಡ್ಡಾಯವಾಗಿ ಉಳಿಸಿಕೊಳ್ಳಬೇಕು.
ಪ್ರಮುಖ ದಿನಾಂಕಗಳು
| ಪ್ರಮುಖ ಘಟನೆಗಳು | ದಿನಾಂಕ |
|---|---|
| ಆನ್‌ಲೈನ್ ಅರ್ಜಿ ಪ್ರಾರಂಭದ ದಿನಾಂಕ | 23-11-2026 |
| ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 22-12-2026 |
| ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ | 23-12-2026 |
ಪ್ರಮುಖ ಲಿಂಕ್‌ಗಳು
| ವಿವರಗಳು | ಲಿಂಕ್ |
|---|---|
| ಅಗ್ನಿಶಾಮಕ ಠಾಣಾಧಿಕಾರಿ (FSO) ಅಧಿಸೂಚನೆ | Click Here |
| ಅಗ್ನಿಶಾಮಕ (Fire Fighter) ಅಧಿಸೂಚನೆ | Click Here |
| ಆನ್‌ಲೈನ್ ಅರ್ಜಿ ಸಲ್ಲಿಸಿ | Click Here |
| ಅಧಿಕೃತ ವೆಬ್‌ಸೈಟ್ | ksfes.karnataka.gov.in |
ಪ್ರಮುಖ ಸೂಚನೆ
ಮೇಲಿನ ಮಾಹಿತಿಯು ಕರಡು ಅಧಿಸೂಚನೆಯನ್ನು (Draft Notification) ಆಧರಿಸಿದೆ. ಅಧಿಕೃತ ಅಧಿಸೂಚನೆ ಪ್ರಕಟವಾದ ನಂತರ ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ ಮತ್ತು ಇತರ ಮಾಹಿತಿಗಳಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ. ಅಧಿಕೃತ ಅಧಿಸೂಚನೆ ಪ್ರಕಟವಾದ ನಂತರ ಸಂಪೂರ್ಣ ಮಾಹಿತಿಯನ್ನು ನವೀಕರಿಸಲಾಗುವುದು.
ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಕಡ್ಡಾಯವಾಗಿ ಪರಿಶೀಲಿಸಿ.



