ಕರ್ನಾಟಕ ಅರಣ್ಯ ಇಲಾಖೆ (KFD) ನೇಮಕಾತಿ 2026: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 450 ಬೀಟ್ ಫಾರೆಸ್ಟರ್ (Beat Forester – Group C) ಹುದ್ದೆಗಳ ಭರ್ತಿಗಾಗಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕರ್ನಾಟಕ ಸರ್ಕಾರದಲ್ಲಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಇದೊಂದು ಅವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು KFD ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22 ಡಿಸೆಂಬರ್ 2026.
KFD ನೇಮಕಾತಿ ಅಧಿಸೂಚನೆಯ ವಿವರಗಳು
| ವಿವರಗಳು | ಮಾಹಿತಿ |
|---|---|
| ಸಂಸ್ಥೆಯ ಹೆಸರು | ಕರ್ನಾಟಕ ಅರಣ್ಯ ಇಲಾಖೆ (KFD) |
| ಒಟ್ಟು ಹುದ್ದೆಗಳು | 450 |
| ಉದ್ಯೋಗ ಸ್ಥಳ | ಕರ್ನಾಟಕ |
| ಹುದ್ದೆಯ ಹೆಸರು | ಬೀಟ್ ಫಾರೆಸ್ಟರ್ (Group C) |
| ಮಾಸಿಕ ವೇತನ | ₹37,500 – ₹76,100 |
ಶೈಕ್ಷಣಿಕ ಅರ್ಹತೆ
KFD ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಕೆಳಕಂಡ ವಿದ್ಯಾರ್ಹತೆಯನ್ನು ಹೊಂದಿರಬೇಕು.
– ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ 12ನೇ ತರಗತಿ / PUC ಉತ್ತೀರ್ಣರಾಗಿರಬೇಕು.
ವಯೋಮಿತಿ
- ಕನಿಷ್ಠ ವಯಸ್ಸು: 18 ವರ್ಷಗಳು
- ಗರಿಷ್ಠ ವಯಸ್ಸು: 32 ವರ್ಷಗಳು
ವಯೋಮಿತಿ ಸಡಿಲಿಕೆ:
| ವರ್ಗ | ವಯೋಮಿತಿ ಸಡಿಲಿಕೆ |
|---|---|
| 2A, 2B, 3A, 3B | 3 ವರ್ಷಗಳು |
| SC / ST | 5 ವರ್ಷಗಳು |
| ಮಾಜಿ ಸೈನಿಕರು (Ex-Servicemen) | 10 ವರ್ಷಗಳು |
ಅರ್ಜಿ ಶುಲ್ಕ
| ಅಭ್ಯರ್ಥಿಗಳ ವರ್ಗ | ಅರ್ಜಿ ಶುಲ್ಕ |
|---|---|
| ಸಾಮಾನ್ಯ, 2A, 2B, 3A, 3B | ₹750/- |
| SC / ST | ₹500/- |
| ಮಾಜಿ ಸೈನಿಕರು / PWD | ₹250/- |
ಆಯ್ಕೆ ವಿಧಾನ
ಅಭ್ಯರ್ಥಿಗಳನ್ನು ಕೆಳಗಿನ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.
- ದೈಹಿಕ ಸಾಮರ್ಥ್ಯ ಪರೀಕ್ಷೆ (Physical Efficiency Test).
- ದೈಹಿಕ ಸಹಿಷ್ಣುತೆ ಪರೀಕ್ಷೆ (Physical Endurance Test).
KFD ನೇಮಕಾತಿ 2026ಕ್ಕೆ ಅರ್ಜಿ ಸಲ್ಲಿಸುವ ವಿಧಾನ
ಅರ್ಹ ಅಭ್ಯರ್ಥಿಗಳು ಕೆಳಗಿನ ಹಂತಗಳನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
- ಮೊದಲಿಗೆ ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.
- ಅರ್ಜಿ ಸಲ್ಲಿಸುವ ಮೊದಲು ಅಗತ್ಯವಿರುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.
- ಅರ್ಜಿ ಸಲ್ಲಿಸಲು ಮಾನ್ಯವಾದ ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಸಿದ್ಧವಾಗಿಟ್ಟುಕೊಳ್ಳಿ.
- ಅಗತ್ಯ ದಾಖಲೆಗಳಾದ ಆಧಾರ್ ಕಾರ್ಡ್, ವಯಸ್ಸಿನ ದಾಖಲೆ, ಶೈಕ್ಷಣಿಕ ಪ್ರಮಾಣಪತ್ರಗಳು, ರೆಸ್ಯೂಮ್ (ಅನ್ವಯಿಸಿದರೆ) ಮುಂತಾದವುಗಳನ್ನು ಸಿದ್ಧಪಡಿಸಿಕೊಳ್ಳಿ.
- ಕೆಳಗೆ ನೀಡಿರುವ KFD Beat Forester Apply Online ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಆನ್ಲೈನ್ ಅರ್ಜಿಯಲ್ಲಿ ಕೇಳಿರುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ.
- ಅಗತ್ಯ ದಾಖಲೆಗಳು ಮತ್ತು ಇತ್ತೀಚಿನ ಭಾವಚಿತ್ರವನ್ನು ಅಪ್ಲೋಡ್ ಮಾಡಿ.
- ನಿಮ್ಮ ವರ್ಗಕ್ಕೆ ಅನ್ವಯವಾಗುವ ಅರ್ಜಿ ಶುಲ್ಕವನ್ನು ಪಾವತಿಸಿ.
- ಕೊನೆಯಲ್ಲಿ Submit ಬಟನ್ ಕ್ಲಿಕ್ ಮಾಡಿ ಅರ್ಜಿಯನ್ನು ಪೂರ್ಣಗೊಳಿಸಿ.
- ಅರ್ಜಿ ಸಲ್ಲಿಸಿದ ನಂತರ ಅರ್ಜಿ ಸಂಖ್ಯೆ / ಸ್ವೀಕೃತಿ ಸಂಖ್ಯೆಯನ್ನು ಮುಂದಿನ ಉಲ್ಲೇಖಕ್ಕಾಗಿ ಕಡ್ಡಾಯವಾಗಿ ಉಳಿಸಿಕೊಳ್ಳಿ.
ಪ್ರಮುಖ ದಿನಾಂಕಗಳು
| ವಿವರಗಳು | ದಿನಾಂಕ |
|---|---|
| ಆನ್ಲೈನ್ ಅರ್ಜಿ ಪ್ರಾರಂಭ ದಿನಾಂಕ | 23-11-2026 |
| ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 22-12-2026 |
| ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ | 23-12-2026 |
ಪ್ರಮುಖ ಲಿಂಕ್ಗಳು
| ವಿವರಗಳು | ಲಿಂಕ್ |
|---|---|
| HK ಅಧಿಕೃತ ಅಧಿಸೂಚನೆ | Click Here |
| NHK ಅಧಿಕೃತ ಅಧಿಸೂಚನೆ PDF | Click Here |
| ಆನ್ಲೈನ್ ಅರ್ಜಿ ಸಲ್ಲಿಸಿ | Click Here |
| ಅಧಿಕೃತ ವೆಬ್ಸೈಟ್ | aranya.gov.in |

