KSDA Recruitment 2026:
ಕರ್ನಾಟಕ ರಾಜ್ಯ ಕೃಷಿ ಇಲಾಖೆ (Karnataka State Department of Agriculture) ವತಿಯಿಂದ 890 ಸಹಾಯಕ ಕೃಷಿ ಅಧಿಕಾರಿ (AAO) ಮತ್ತು ಕೃಷಿ ಅಧಿಕಾರಿ (AO) ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು KEA ಅಧಿಕೃತ ಅಧಿಸೂಚನೆಯ ಪ್ರಕಾರ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
👉 ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಇದು ಉತ್ತಮ ಅವಕಾಶವಾಗಿದೆ.
👉 ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 10 ಮೇ 2026
ಹುದ್ದೆಗಳ ವಿವರ
- ಸಂಸ್ಥೆ ಹೆಸರು: ಕರ್ನಾಟಕ ರಾಜ್ಯ ಕೃಷಿ ಇಲಾಖೆ (KSDA)
- ಒಟ್ಟು ಹುದ್ದೆಗಳು: 890
- ಉದ್ಯೋಗ ಸ್ಥಳ: ಕರ್ನಾಟಕ
- ಹುದ್ದೆಗಳ ಹೆಸರು:
- ಸಹಾಯಕ ಕೃಷಿ ಅಧಿಕಾರಿ (AAO)
- ಕೃಷಿ ಅಧಿಕಾರಿ (AO)
- ವೇತನ: ₹69,250 – ₹1,34,200 ಪ್ರತಿ ತಿಂಗಳು
ಹುದ್ದೆಗಳ ವಿಂಗಡಣೆ:
| ಹುದ್ದೆ ಹೆಸರು | KK | RPC | ಒಟ್ಟು |
|---|---|---|---|
| ಕೃಷಿ ಅಧಿಕಾರಿ (AO) | 40 | 81 | 121 |
| ಸಹಾಯಕ ಕೃಷಿ ಅಧಿಕಾರಿ (AAO) | 218 | 551 | 769 |
| ಒಟ್ಟು | 258 | 632 | 890 |
ಅರ್ಹತೆ (Eligibility)
ವಿದ್ಯಾರ್ಹತೆ:
ಅಭ್ಯರ್ಥಿಗಳು ಕೆಳಗಿನ ವಿದ್ಯಾರ್ಹತೆಗಳಲ್ಲಿ ಒಂದನ್ನು ಪೂರ್ಣಗೊಳಿಸಿರಬೇಕು:
- B.Sc Agriculture
- B.Tech Biotechnology
- Agricultural Engineering
(ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ)
ವಯೋಮಿತಿ
- ಕನಿಷ್ಠ ವಯಸ್ಸು: 21 ವರ್ಷ
- ಗರಿಷ್ಠ ವಯಸ್ಸು: 40 ವರ್ಷ
ವಯೋ ಸಡಿಲಿಕೆ:
- SC/ST/Cat-1: 5 ವರ್ಷ
- OBC (2A/2B/3A/3B): 3 ವರ್ಷ
- ಅಂಗವಿಕಲರು / ವಿಧವೆ: 10 ವರ್ಷ
ಅರ್ಜಿ ಶುಲ್ಕ
- Ex-Servicemen: ₹250
- SC/ST/Cat-1/PWD: ₹500
- General / OBC: ₹750
- ಪಾವತಿ ವಿಧಾನ: ಆನ್‌ಲೈನ್
ಆಯ್ಕೆ ವಿಧಾನ (Selection Process)
- ಕನ್ನಡ ಭಾಷಾ ಪರೀಕ್ಷೆ
- ಸ್ಪರ್ಧಾತ್ಮಕ ಪರೀಕ್ಷೆ (OMR ಆಧಾರಿತ)
ಅರ್ಜಿ ಸಲ್ಲಿಸುವ ವಿಧಾನ
- ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
- ನಿಮ್ಮ ಅರ್ಹತೆ ಪರಿಶೀಲಿಸಿ.
- ಸರಿಯಾದ Email ID ಮತ್ತು ಮೊಬೈಲ್ ನಂಬರ್ ಸಿದ್ಧವಾಗಿರಲಿ.
- ಅಗತ್ಯ ದಾಖಲೆಗಳನ್ನು (ID proof, ವಯಸ್ಸು, ವಿದ್ಯಾರ್ಹತೆ) ಸಿದ್ಧವಾಗಿರಲಿ.
- ಆನ್‌ಲೈನ್ ಅರ್ಜಿ ಲಿಂಕ್ ಕ್ಲಿಕ್ ಮಾಡಿ.
- ಎಲ್ಲಾ ಮಾಹಿತಿಯನ್ನು ಸರಿಯಾಗಿ ನಮೂದಿಸಿ.
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕವನ್ನು ಪಾವತಿಸಿ.
- Submit ಮಾಡಿ ಮತ್ತು Application Number ಅನ್ನು ಉಳಿಸಿ.
ಪ್ರಮುಖ ದಿನಾಂಕಗಳು
- ಅರ್ಜಿ ಪ್ರಾರಂಭ ದಿನಾಂಕ: 19 ಏಪ್ರಿಲ್ 2026
- ಕೊನೆಯ ದಿನಾಂಕ: 10 ಮೇ 2026
- ಶುಲ್ಕ ಪಾವತಿ ಕೊನೆಯ ದಿನಾಂಕ: 12 ಮೇ 2026
- ಪರೀಕ್ಷೆ ದಿನಾಂಕ: 6 ಮತ್ತು 7 ಜೂನ್ 2026

